ಗುಬ್ಬಿ (Gubbi - Sparrow)


Photo by Brandon Green on Unsplash

ಬಗ್ಗ್-ಬಗ್ಗ್  ನೋಡ್ತಾನೆ,

ಇಂಣಿಕ್-ಇಂಣಿಕ್  ನೋಡ್ತಾನೆ,

ಏಗರ್-ಏಗರ್ ನೋಡ್ತಾನೆ,

ಇದು ನನ್ನ್-ನಿನ್ನ್  ಮಧ್ಯದ್ ವಿಷಯ

ಮೂಗ್ತೂರ್ಸಕ್ಕೆ ಇವನ್ಗೆನೈತೇ ಕೆಲ್ಸಾ ಇಲ್ಲಿ? 


ನಡುಬೀದಿನಲ್ಲಿ  ಹಗಲ್ಹೊತ್ತೆ  ಕಾಣ್ಸ್ಕೊಂತಾನೆ,

ನನ್ನ್ ಮೇಲೆ  ಬೋಟ್ಮಾಡಿ ಕೈ ತೋರುಸ್ತಾನೆ,

ಹಿಂದ್-ಹಿಂದೆ  ಅಕ್-ಪಕ್ಕಾನೆ  ಸುಳಿತಿರ್ತಾನೆ,

ಕಿವಿನಲ್ಲಿ  ಪಿಸ್ಗುಡ್ತಾ  ಬೋಧುಸ್ಥಾನೆ -

"ನೆಟ್ಗಿರು  ಇಲ್ಲಾಂದ್ರೆ  ಗೊತ್ತಲ್ಲ... " ಅಂಥ  ಬೆದುರುಸ್ತಾನೆ.


ಬಾಯಿ ಗಾತ್ರ, ಮೈ ಸಣ್ಣ,

ಬಾಯಿ ಗಾತ್ರ, ಮೈ ಸಣ್ಣ,

ಕಾಲ್ಕೆರ್ಕೊಂಡು-ಮೈಪರ್ಚ್ಕೊಂಡು  ಕುಣಿತಿರ್ತಾನೆ.

"ನನ್ಗ್ ಗೊತೈತ್ ನಿನ್ಬಣ್ಣ,

ನಾಳೆ  ಮತ್ಬರ್ತೀನಿ" ಅಂತ್ ಹೇಳಿ    

ಕ್ಯಾಕರ್ಸಿ ಉಗುದ್ ಹೋಗ್ತಾನೆ.


ಕಲ್ಲ್  ತೂರ್ಲಿ, ಕೊಂದ್ ಹಾಕ್ಲಿ,

ಕಲ್ಲ್  ತೂರ್ಲಿ, ಕೊಂದ್ ಹಾಕ್ಲಿ,

ಇವ್ನ್ಎದುರು  ಬರಿಗೈನಲ್ ನಿಲ್ತೀನಿ;  ಬಂಧಧ್  ಬರ್ಲಿ.


ನಾನ್ ಗುಬ್ಬಿ, ನೀನ್ ಕಾಗೆ,  

ನಾವ್ವ್ ನಕ್ಕ್ರೆ  ಇವನಗಾಗೋ ತೊಂದ್ರೆ  ಏನೆ?



Comments

Popular Posts